Ishtu Dina Ee Vaikunta Estu
Dooraennutalidde-Kanakadasaru
ಈಶ್ಟು ದಿನ ಈ ವೈಕುಂಟ ಎಶ್ಟು ದೂರವು ಎನ್ನುತಲಿದ್ದೆ
ದ್ರಿಶ್ಟಿಯಿಂದಲಿ ನಾನು ಕಂಡೆ ಸ್ರಿಶ್ಟಿಗೀಶನೆ ಶ್ರೀರ೦ಗಶಾಯೀ
ದ್ರಿಶ್ಟಿಯಿಂದಲಿ ನಾನು ಕಂಡೆ ಸ್ರಿಶ್ಟಿಗೀಶನೆ ಶ್ರೀರ೦ಗಶಾಯೀ
ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರ೦ಗಶಾಯಿ 1
ತುಂಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರ೦ಗಶಾಯಿ 1
ವನ ಉಪವನಗಳ ಕಂಡೆ ಘನ ಸರೋವರಗಳ ಕಂಡೆ
ಕನಕಗೋಪುರಂಗಳಿ೦ದ ಘಾನ ಶೋಭಿತನೆ ರಂಗಶಾಯಿ 2
ಕನಕಗೋಪುರಂಗಳಿ೦ದ ಘಾನ ಶೋಭಿತನೆ ರಂಗಶಾಯಿ 2
ವಜ್ರವೈಡೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ 3
ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ 3
ರಂಬೆಉರ್ವಶಿಯರ ಮೇಳವ ಕಂಡೆ ತು೦ಬುರು ಮುನಿ ನಾರದರನು ಕಂಡೆ
ಅ೦ಬುಜೋದ್ಭವ ರುದ್ರರ ಕಂಡೆ ಶಂಬರಾರಿ ಪಿತನೇ ರಂಗಶಾಯಿ 4
ಅ೦ಬುಜೋದ್ಭವ ರುದ್ರರ ಕಂಡೆ ಶಂಬರಾರಿ ಪಿತನೇ ರಂಗಶಾಯಿ 4
ನಾಗಶಯನನ ಮುರುಥಿ ಕಂಡೆ ಭೋಗಿಭೂಶನ ಶಿವನನು ಕಂಡೆ
ಭಾಗವತರ ಸ೦ಮೇಳವ ಕಂಡೆ ಕಾಗಿನೆಲೆಯಾದಿ ಕೇಶವನ ನಾ ಕಂಡೇ 5
ಭಾಗವತರ ಸ೦ಮೇಳವ ಕಂಡೆ ಕಾಗಿನೆಲೆಯಾದಿ ಕೇಶವನ ನಾ ಕಂಡೇ 5